Aug 24, 2009

'ಕಮೀನೇ'ಯಲ್ಲಿ ಕಮೀನಾ ಯಾರು?

[ಮಿತ್ರ 'ಕತ್ತಿ ಮಹೇಶ್ ಕುಮಾರ್' ತನ್ನ ತೆಲುಗು ಬ್ಲಾಗ್‍ನಲ್ಲಿ ಬರೆದ ಒಂದು ತುಣುಕಿನ ಕನ್ನಡ ರೂಪ]
"ಕಮೀನೇ" (ರೋಗ್ಸ್/ರಾಸ್ಕಲ್ಸ್??!!) ಸಿನೆಮಾ ನೋಡಿ ಥಿಯೇಟರ‍್ನಿಂದ ಹೊರ ಬಂದಾಗ ಒಬ್ಬ ಮಿತ್ರ ಕೇಳಿದ -
"ಇಷ್ಟಕ್ಕೂ, ಈ ’ಕಮೀನೇ’ ಗಳಲ್ಲಿ ನಿಜವಾದ ’ಕಮೀನಾ’ ಯಾರು?" ಎಂದು.
ಆಗ "ಕಮೀನಾ ಏಕವಚನ.. ಕಮೀನೇ ಬಹುವಚನ. ಹಾಗಾಗಿ ಸಿನೆಮಾದಲ್ಲಿರುವವರೆಲ್ಲಾ ಕಮೀನೇಗಳೇ " ಎಂದು ಹೇಳಿ ಅವನಿಂದ ತಪ್ಪಿಸಿಕೊಂಡೆ.
ಅದಾದ ಮೇಲೆ ಯೋಚಿಸುತ್ತಿರುವಾಗ ಯಾಕೋ ಜಾವೆದ್ ಅಖ್ತರ್ ನೆನಪಾದರು.
ಛೇ! ಅವರು ಕಮೀನಾ ಅಂತ ಅಲ್ಲ. ಜಾವೆದ್ ಅಖ್ತರ್ 2008 ರಲ್ಲಿ ತಮ್ಮ ಒಂದು ಉಪನ್ಯಾಸದಲ್ಲಿ ನುಡಿದ ಮಾತುಗಳು ನೆನಪಾದವು.
"In the 1940s, we had the Zamindars as villains, which was a reflection of the actual state of affairs. In the 50s, this villain lot was replaced by the factory owner bully. In the 60s, however, the underworld don of big cities ruled the small screen as the bad guy. In the 70s, this underworld don became a hero, In the 1980s, the villain in a Hindi film was invariably a policeman or a politician - yet again a reflection of societal affairs. In the 90s, Pakistan became the villain,In the new millennium, we don't have any villains; such characters in today's movies frighteningly resemble us!"
ವಿಚಿತ್ರವೆಂದೆನಿಸಿದರೂ ಬಹುಶಃ ಇದೇ ನಿಜವಾಗಿರಬೇಕು.
’ಕಮೀನೇ’ ಸಿನೆಮಾದ ಪಾತ್ರಗಳೆಲ್ಲವೂ ಕೆಲಸಕ್ಕೆಬಾರದ ಕಮೀನೇಗಳೇ. ನಮ್ಮೊಳಗಿನ ಅಲ್ಪ-ಸ್ವಲ್ಪ ಕಮೀನಾಪನ್ ಬೆರೆತಿರುವ ರಾಸ್ಕಲ್ಸೇ..!!
ಹಾಗಾಗಿ ’ಕಮೀನೇ’ ಯಲ್ಲಿ ಎಲ್ಲರೂ ಕಮೀನೇಗಳೇ....ನೋಡಿದ ನಾವೂ ಸಹಾ..
*********

No comments:

Post a Comment