Aug 12, 2009

ಕುರ್ಚಿ

ಅಧಿಕಾರದ ಕುರ್ಚಿಯೆಂಬುದು
ಮರದ್ದಾಗಿರಲಿ
ಲೋಹದ್ದಾಗಿರಲಿ
ರತ್ನಖಚಿತವಾಗಿರಲಿ
ಚಿನ್ನ ಬೆಳ್ಳಿಯಿಂದ ತಯಾರಾಗಿರಲಿ
ಬೇರಾವ ವಸ್ತುವಿನಿಂದಲೇ
ತಯಾರಾಗಿರಲಿ...
ಅದು ಅಧಿಕಾರದ ಕುರ್ಚಿಯೇ..!!

ಅಧಿಕಾರದ ಕುರ್ಚಿಯಿಂದ
ಸಿಂಹವನ್ನು ಹೊರದಬ್ಬಿದಾಗ
ಅದು ಕುರಿಯಾಗಿ
"ಉಮ್ಮೆಹೆಹೆಹೆ..ಉಮ್ಮೆಹೆಹೆಹೆ..." ಎಂದು
ರೋಧಿಸಲಾರಂಭಿಸುತ್ತದೆ.

ಅಧಿಕಾರದ ಕುರ್ಚಿಯ ಮೇಲೆ
ಕುರಿಯನ್ನು ಕೂರಿಸಿದರೆ
ಕ್ಷಣದಲ್ಲಿಯೇ ಅದು ಸಿಂಹವಾಗಿ
"ಗುರ್ರ್.......ಗುರ್ರ್......." ಎಂದು
ಘರ್ಜಿಸಲಾರಂಭಿಸುತ್ತದೆ.

ಅಧಿಕಾರದ ಕುರ್ಚಿಯೇ ದೇಶವಾಗೋದಾಗ
ದೇಶ ಮೌನವಾಗಿ ರೋಧಿಸಲಾರಂಭಿಸುತ್ತದೆ.
ಆಗ ದೇಶವೆಂಬುದು
ಎಲ್ಲಿರುತ್ತದೆ...??

ನೇಪಾಳಿ ಮೂಲ: ಮಹೇಂದ್ರ ಷಾಹಿ.

No comments:

Post a Comment