Dec 2, 2011

ಶಾಲೆಯಲ್ಲಿ ಬೇಸಿಗೆ


ಬೇಸಿಗೆ ರಜೆಯಲ್ಲಿ ಶಾಲೆಯನ್ನು ಕಂಡಾಗ
ಗತಿಸಿದ ವೈಭವವನ್ನು ಕಳೆದುಕೊಂಡ
ಸಾಮ್ರಾಜ್ಯದಂತೆ ಕಾಣಿಸುತ್ತದೆ.

ಬಿಕೋ ಎನ್ನುವ ತರಗತಿಗಳು
ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುವ ಗೋಡೆಗಳು
ಸುಭಾಷಿತಗಳು, ಚಾರ್ಟುಗಳು
ಪ್ರೇಕ್ಷಕರಿಗಾಗಿ ಕಾದು ನಿಂತ ರಂಗಭೂಮಿಗಳಂತೆ
ಮಕ್ಕಳ ಮಾತು ಕೇಳದೆ ಮೂಕವಾಗಿವೆ.

ಮಿನುಗು ತಾರೆಗಳಿಲ್ಲದ
ಕತ್ತಲ ರಾತ್ರಿಗಳು ಈ ಕಪ್ಪು ಹಲಗೆಗಳು!
ಪೈಪೋಟಿಗೆ ಬಿದ್ದು ಕಟ್ಟಿಕೊಂಡ
ರಂಗು ರಂಗಿನ ಕಾಗದದ ತೋರಣಗಳು
ಕಿತ್ತು, ಹರಿದು, ಕಳೆಗುಂದಿ
ತೂಗಾಡುತ್ತಿರುವ ದೃಶ್ಯಗಳು!

ಗುಟುಕು ನೀರು ಕುಡಿಯಲು
ತನ್ನ ಬಳಿ ಯಾರೂ ಬರುತ್ತಿಲ್ಲವೆಂದು
ಒಂದೊಂದೇ ತೊಟ್ಟು ಕಣ್ಣೀರಿಡುತ್ತಿದೆ
ಕೊಳಾಯಿ.

ಪುಟ್ಟ ಪುಟ್ಟ ಕಣ್ಣುಗಳು
ತನ್ನ ಹೂಗಳನ್ನು ನೋಡುತಿಲ್ಲವೆಂದು
ಬಾಡಿಹೋಗಿದೆ ಪುಟ್ಟ ಸಸಿ!

"ಸೈಲೆನ್ಸ್! ಸೈಲೆನ್ಸ್! ಎನ್ನುತ್ತಿದ್ದವರೇ
ಈಗ ಈ ಭೀಕರ ನಿಶ್ಯಬ್ದವನ್ನು
ಸಹಿಸಲಾಗಿದ್ದಾರೆ.

[ತೆಲುಗು ಕವಿತೆಯೊಂದರ ಆಧಾರ]

Jan 23, 2011

ಬೇಕು..ಬೇಡಗಳ ನಡುವೆ

"ದೇಶ ಬೇಕು, ದ್ವೇಷ ಬೇಡ." - ಸ್ವಾಮಿ ವಿವೇಕಾನಂದ.
"ಹೆಣ್ಣು ಬೇಡ, ಮಣ್ಣು (ಗಣಿ) ಬೇಕು." - ರೆಡ್ಡಿ ಬ್ರದರ್ಸ್.
"ಹುಡುಗಿ ಬೇಕು, ಮದುವೆ ಬೇಡ." - ನಿತ್ಯಾನಂದ.
"ಗೆಳೆಯ ಬೇಡ, ಗೆಳೆಯನ ಹೆಂಡ್ತಿ ಬೇಕು." - ಹಾಲಪ್ಪ.
"ಮದ್ವೆ ಬೇಡ, ಮಗು ಬೇಕು." - ಕುಮಾರ ಸ್ವಾಮಿ.
"ಡಾಕ್ಟರ್ ಬೇಡ, ನರ್ಸ್ ಬೇಕು." - ರೇಣುಕಾಚಾರ್ಯ.
"ಕಟ್ಕಂಡೋಳು ಸಾಯ್ಲಿ, ಇಟ್ಕಂಡೋಳು ಮಂತ್ರಿ ಆಗ್ಲಿ." - ಯಡಿಯೂರಪ್ಪ.