Jun 29, 2010

ಮರ್ಯಾದೆ ಪ್ರಶ್ನೆ!!

ಸೀತಾ ಮಾತೆ ತುಂಬಾ ಅದೃಷ್ಟವಂತೆ. ಅಷ್ಟು ವರ್ಷಗಳು ತನ್ನೊಡನೆ ಸಂಸಾರ ಮಾಡಿದರೂ ಶ್ರೀ ರಾಮಚಂದ್ರ ಅವಳನ್ನು ಕೇವಲ ಒಂದೇ ಒಂದು ಬಾರಿ ಅಗ್ನಿ ಪರೀಕ್ಷೆಗೆ ಒಳಪಡಿಸಿದ್ದ. ಮುಂದೆಂದೋ ಅನ್ಯಾಯವಾಗಿ ಕಾಡುಪಾಲದ ಮೇಲೆ ಎರಡನೇ ಪರೀಕ್ಷೆ ಮಾಡಿ ಎಂದು ಯಾರೂ ಕೇಳದಿದ್ದರೂ, ಅಂತಹ ಪರೀಕ್ಷೆಯಿಡುವ ಮುಂಚೆಯೇ ತಾಳ್ಮೆ ಕಳೆದುಕೊಂಡ ಸೀತಾ ಮಾತೆ ಭೂದೇವಿಯ ಗರ್ಭ ಸೇರಿಬಿಡುತ್ತಾಳೆ. ನಮ್ಮ ತೆಲಂಗಾಣ ಪ್ರಜೆಗಳು ಹಾಗಲ್ಲ. ತಾಳ್ಮೆಯಲ್ಲಿ ಅವರು ಸೀತಾಮಾತೆಯಲ್ಲ, ಅವರ ಅಮ್ಮನನ್ನು ಮೀರಿದವರು. ಅವರ ಪ್ರಮೇಯವೇ ಇಲ್ಲದೇ, ಹೇಳದೇ, ಕೇಳದೇ ಯಾರಾದರೊಬ್ಬರು ಅವರನ್ನು ಅಗ್ನಿ ಪರೀಕ್ಷೆಗೆ ಗುರಿಪಡಿಸುತ್ತಲೇ ಇರುತ್ತಾರೆ. ಪಾಪ ಅವರೂ ಸಹ ತಮ್ಮ ಪಾಲಿಗೆ ಬಂದ ಪರೀಕ್ಷೆಗಳಲ್ಲೆಲ್ಲಾ ಪಾಸಾಗುತ್ತಲೇ ಇದ್ದಾರೆ. ಇಷ್ಟಾದರೂ, ಪರೀಕ್ಷೆಗಳು ಬಂದು ಬೀಳುತ್ತಲೇ ಇರುತ್ತವೆ.


1971 ರಿಂದ ನಂದಿಹೋಗಿದ್ದ ತೆಲಂಗಾಣ ಜ್ಯೋತಿಯನ್ನು 30 ವರ್ಷಗಳ ನಂತರ ಕಲ್ವಕುಂಟ್ಲ ಚಂದ್ರಶೇಖರ ರಾವ್ ಎನ್ನುವ ಆಸಾಮಿ ಮರಳಿ ಹೊತ್ತಿಸಿ ಕೈಗೆತ್ತಿಕೊಂಡ ಕ್ಷಣದಿಂದ ತೆಲೆಂಗಾಣದ ಜನರ ಪುಣ್ಯಕಾಲವೆಲ್ಲಾ ಕೆಲಸಕ್ಕೆ ಬಾರದ ಪರೀಕ್ಷೆಗಳಿಗೇ ಸರಿಹೋಗುತ್ತಿದೆ. 2001 ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ [ತೆರಾಸ] ಎಂಬ ಪೆಟ್ಟಿ ಅಂಗಡಿಯನ್ನು ತೆರೆಯುತ್ತಲೇ KCR ಎಮ್ಮೆಲ್ಯೆ ಗಿರಿಗಿ ಸಲಾಂ ಹೊಡೆದು ಸಿದ್ದಿಪೇಟೆಯ ಕಣದಲ್ಲಿ ಬಂದು ನಿಂತ. ಆ ಚುನಾವಣೆಯನ್ನು ತೆಲೆಂಗಾಣವಾದದ ಅಗ್ನಿ ಪರೀಕ್ಷೆಯೆಂದೇ ಪ್ರತಿಬಿಂಬಿಸಿದ. ಹೌದು, ಇದ್ದರೂ ಇರಬಹುದೆಂದು ಉತ್ಸಾಹಗೊಂಡ ಜನ ಭಾರೀ ಮೆಜಾರಿಟಿಯಿಂದ KCR ರನ್ನು ಗೆಲ್ಲಿಸಿಬಿಟ್ಟರು. ಮೂರು ವರ್ಷಗಳು ತುಂಬುವ ಮೊದಲೇ ವಿಧಾನಸಭೆಯ ಚುನಾವಣೆಗಳು ಬಂದವು. 9 ವರ್ಷಗಳ ಕಾಲ ಮನಸೋ ಇಚ್ಛೆ ಆಡಳಿತ ನಡೆಸಿದ "ವೀರ ಸಮೈಕ್ಯತಾವಾದಿ" ಚಂದ್ರಬಾಬು ನಾಯ್ಡು ಒಂದು ಕಡೆಯಾದರೆ, ತೆಲೆಂಗಾಣದ ವೋಟ್-ಬ್ಯಾಂಕನ್ನು ಬಾಚುವ ತಂತ್ರದಿಂದ ತೆರಾಸದೊಂದಿಗೆ ಸೆರಗು ಬಿಗಿದುಕೊಂಡ ಕಾಂಗ್ರೆಸ್ ಇನ್ನೊಂದು ಕಡೆ. ಅದನ್ನೂ ಕೂಡಾ ಅಗ್ನಿಪರೀಕ್ಷೆಯೆಂದೇ ಕರೆದರು ಮಾನ್ಯ KCR. ತೆಲೆಂಗಾಣ-ವಿರೋಧಿ ಪಾರ್ಟಿಯನ್ನು ಮಣ್ಣು ಮುಕ್ಕಿಸಿ, ತೆಲೆಂಗಾಣ-ಪರವಾದ ಪಾರ್ಟಿಯನ್ನು ತಲೆಮೇಲೆ ಕೂರಿಸಿಕೊಂಡ ಜನ ಆ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ನಲ್ಲಿ ಪಾಸಾದರು. ಅದಾದ ಎರಡೇ ವರ್ಷಗಳಲ್ಲಿ ಮೂರನೇ ಪರೀಕ್ಷೆ ಬಂತು ನೋಡಿ! ಆರಿಸಿಬಂದ ನಂತರ ತನ್ನ ಕ್ಷೇತ್ರದ ಕಡೆ ಅಪ್ಪಿ ತಪ್ಪಿ ಕಣ್ಣೆತ್ತಿ ನೋಡದ KCR, ತನ್ನ ಸ್ಥಾನವನ್ನು ಬಿಟ್ಟು ಈ ಬಾರಿ ತೊಡೆತಟ್ಟಲು ಕರೀಂನಗರವನ್ನು ಆಯ್ದುಕೊಂಡ. ಸಾಧಾರಣವಾಗಿ, ತನ್ನ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಸ್ಪಂದಿಸದ ತಪ್ಪಿಗಾಗಿ ಜನ ತಕ್ಕ ಶಾಸ್ತಿಯನ್ನೇ ಮಾಡಬೇಕಿತ್ತು. ಆದರೂ - ತಾನು ಸೋತರೆ ತೆಲಂಗಾಣವೇ ಸೋತಂತೆ ಎಂದು ಜನರೆಲ್ಲಾ ಆಡಿಕೊಳ್ಳುತ್ತಾರೆ ಎಂದು ಹೇಳಿದ್ದೇ ತಡ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ತೆಲೆಂಗಾಣಿಗರು ತಲಾ ಒಂದು ಕೈ ಹಾಕಿ 2 ಲಕ್ಷಕ್ಕೂ ಹೆಚ್ಚು ಮತಗಳ ರೆಕಾರ್ಡ್ ಮೆಜಾರಿಟಿಯಿಂದ KCR ರನ್ನು ಗೆಲ್ಲಿಸಿ, ಆ ಪರೀಕ್ಷೆಯಲ್ಲೂ ಪಾಸಾಗಿ ಕೃತಾರ್ಥರಾದರು.


2009 ರ ಹೊತ್ತಿಗೆ ಸೀನೇ ಬದಲಾಗಿಬಿಟ್ಟಿತ್ತು. "ವೀರ ಸಮೈಕ್ಯತಾವಾದಿ"ಯ ಪಾತ್ರವನ್ನು ಈಗ ವೈ.ಎಸ್. ರಾಜಶೇಖರ್ ರೆಡ್ಡಿ ಪೋಷಿಸಲಾರಂಭಿಸಿದರು. "ವೀರ ಅವಕಾಶವಾದಿ"ಯಾದ ಚಂದ್ರಬಾಬು ಅರ್ಜೆಂಟಾಗಿ ತೆಲಂಗಾಣಕ್ಕೆ ಮತಾಂತರಗೊಂಡು, ಚುನಾವಣಾ-ವೈತರಣಿಯನ್ನು ದಾಟಲು ತೆಲಂಗಾಣ ಗೋವಿನ ಬಾಲ ಹಿಡಿದುಕೊಂಡ. 2004 ರಲ್ಲಿ "ಸಮೈಕ್ಯವಾದಿ"ಯಾಗಿದ್ದುಕೊಂದು ತೆಲಂಗಾಣ ಪ್ರಾಂತ್ಯದಲ್ಲಿ 100 ರಲ್ಲಿ 10 ಸೀಟ್‍ಗಳ ಮೇಲೆ ಒಂದು ಸೀಟನ್ನೂ ಗೆಲ್ಲಲು ಕೈಲಾಗದ ದೇಶಂ-ಬಾಬು, 2009 ರಲ್ಲಿ ತೆಲಂಗಾಣವಾದದ ಚಂದಾ ಕಟ್ಟಿದ ಮೇಲೆ 38 ಸೀಟ್‍ಗಳನ್ನು ಗೆದ್ದುಬಿಟ್ಟ. ರಾಜ್ಯದೆಲ್ಲೆಡೆ ಊರಾಬಟ್ಟೆಯಾದರೂ, ತೆಲಂಗಾಣ ಮಂತ್ರ ಮಹಿಮೆಯಿಂದಲೋ ಏನೋ ಈ ಒಂದೇ ಪ್ರಾಂತ್ಯದಲ್ಲಿ ತನ್ನ ಮರ್ಯಾದೆಯನ್ನುಳಿಸಿಕೊಂಡ. ಹಾಗೆ ನೋಡಿದರೆ, "ಸಮೈಕ್ಯತಾವಾದಿ" ವೈ.ಎಸ್. ವಿಜೃಂಭಿಸಿದ ಆ ನಾಲ್ಕನೇ ನಂಬರ್ ಅಗ್ನಿಪರೀಕ್ಷೆಯಲ್ಲೂ ಸಹಾ ತೆಲಂಗಾಣ ವಾದವು ಅಲ್ಪ-ಸ್ವಲ್ಪ ಮಾರ್ಕಿನಿಂದ ಪಾಸಾದಂತೆಯೇ! ಅಷ್ಟು ಹೊತ್ತಿಗಾಗಲೇ ಜನರಿಗೆ ಸಾಕು ಸಾಕಾಗಿ ಹೋಗಿತ್ತು. ಆದರೂ ಕನಿಕರ ತೋರದ KCR ದೊರೆಗಳು "ಸುಮ್ಮಸುಮ್ಮನೇ" ಉಪ-ಚುನಾವಣೆಯನ್ನು ತಂದುಬಿಟ್ಟರು. ಇದು ಒಂಥರಾ ದೊಡ್ಡ ಶೀಲ-ಪರೀಕ್ಷೆ. ಇರುವ ಹತ್ತು ಸೀಟ್‍ಗಳಲ್ಲಿ ಒಂದು ಸೀಟ್ ಬಿಟ್ಟುಕೊಟ್ಟರೂ ಅದು ತೆರಾಸ ಪಾರ್ಟಿಗೆ "ಯಮ-ಡೇಂಜರ್" ಎಂದು ಹೀಗಾಗಲೇ ಹೆದರಿಸಿಬಿಟ್ಟಿದ್ದಾರೆ KCR. ಇದ್ದರೂ ಇರಬಹುದೆಂದು ಈ ಸಲವೂ ಗೆಲ್ಲಿಸಿಬಿಟ್ಟರೂ ಸಹಾ, ಮತ್ತೆ ಆರು ತಿಂಗಳಿಗೋ, ವರ್ಷಕ್ಕೋ ಮತ್ತೊಂದು ಶೀಲ-ಪರೀಕ್ಷೆಯನ್ನು ಖಂಡಿತ ಜನರ ಮುಂದಿಡುತ್ತಾನೆ ಈ ವಯ್ಯ.


"ತನ್ನ ಸಾವು ಪ್ರಪಂಚಕ್ಕೇ ಪ್ರಳಯ ತರುತ್ತದೆ" ಎನ್ನುವಂತೆ, ತನ್ನ ಸೋಲು ತೆಲಂಗಾಣಕ್ಕೇ ಸೋಲು ತರುತ್ತದೆ ಎಂದು ಭಯ ಹುಟ್ಟಿಸುತ್ತಿರುವ KCR ಗೆ, ಇದು ಬುದ್ಧಿವಂತ ರಾಜಕೀಯವೆಂದೆನಿಸಿರಬಹುದು. ಆದರೆ, ತೆಲಂಗಾಣ ರಾಜ್ಯದ ರಚನೆಯನ್ನು ವಿರೋಧಿಸಿ, "ಸಮೈಕ್ಯವಾದ"ವನ್ನು ಬಲಪಡಿಸುತ್ತಿರುವ ಪ್ರಜಾ ರಾಜ್ಯಂ, CPM ನಂತಹ ಪಾರ್ಟಿಗಳ್ಯಾವುವೂ ಈ ಬಾರಿಯ ಚುನಾವಣಾ ಕಣಕ್ಕಿಳಿದಿಲ್ಲ. ಸ್ಪರ್ಧೆಯಲ್ಲಿರುವ ಪಾರ್ಟಿಗಳೆಲ್ಲಾ ತೆಲಂಗಾಣ ರಚನೆಗೆ ನಾವು ವಿರೋಧಿಯಲ್ಲ ಎಂದು ಹೇಳಿಕೊಂಡಿರುವಂತಹುವೇ! "ಎರಡು ಕಣ್ಣಿನ" ಬಾಬು ಕೂಡಾ, ಬೇರೆ ಬೇರೆ ಎರಡು ರಾಜ್ಯಗಳಿಗೆ ಓ.ಕೆ. ಎನ್ನುತ್ತಲೇ [ಮೇಲ್ನೋಟಕ್ಕಾದರೂ] ಬಂದಿದ್ದಾನೆ. ವೈ. ಎಸ್. ಮರಣದ ನಂತರ ಕಾಂಗ್ರೆಸ್‍ನಲ್ಲೂ ಸಹಾ "ಸಮೈಕ್ಯವಾದ" ದ ನಿಶೆ ಇಳಿಯತೊಡಗಿದೆ. ತೆಲಂಗಾಣ ರಾಜ್ಯ ರಚನೆಯ ಕೆಲಸವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಪಾರ್ಲಿಮೆಂಟ್‍ನಲ್ಲಿ ಪ್ರಕಟಿಸಿರುವುದೂ, ನಿರ್ದಿಷ್ಟವಾದ ಗಡುವನ್ನು ಕೊಟ್ಟು ಶ್ರೀಕೃಷ್ಣ ಕಮಿಟಿಯನ್ನು ನಿಯಮಿಸಿರುವುದೂ ಕಾಂಗ್ರೆಸ್ ಪಾರ್ಟಿಯೇ ಆಗಿರುವುದರಿಂದ, ಆ ಪಾರ್ಟಿಯನ್ನು ತೆಲಂಗಾಣ-ವಿರೋಧಿ ಪಾರ್ಟಿಯೆಂದು ಹಣೆಪಟ್ಟಿ ಕಟ್ಟಿದರೆ ಅದು ನಿಲ್ಲುವುದೂ ಇಲ್ಲ. ಇನ್ನು, ಅಯ್ಯೋ ಪಾಪ ಎಂಬಂತಾಗಿರುವ ಬಿಜೆಪಿ, ಎಲ್ಲಾ ಪಾರ್ಟಿಗಳಿಗಿಂತಲೂ ಮೊದಲಿನಿಂದ ತೆಲಂಗಾಣ ರಾಗವನ್ನು ಹಾಡುತ್ತಾ ಬಂದಿದೆ. ತೆಲಂಗಾಣದ ಪೇಟೆಂಟ್ ಮತ್ತು ಕಾಪಿರೈಟ್ ನನ್ನದೇ ಎಂಬುದು ತೆರಾಸದ ಸರಾಸರಿ ವಾದ. ಕಣದಲ್ಲಿರುವ ಪಾರ್ಟಿಗಳೆಲ್ಲಾ ತೆಲಂಗಾಣವಾದದ ಚಂದಾದಾರರೇ ಆಗಿರುವಾಗ, ಯಾವ ಪಾರ್ಟಿ ಗೆದ್ದರೇನು? ಸೋತರೇನು? ಯಾವ ಪಾರ್ಟಿಗೆ ಎಷ್ಟು ಸೀಟ್ ಬಂದವು, ಎಷ್ಟು ಸೀಟ್ ಹೋದವು - ಇದರಿಂದ ತೆಲಂಗಾಣಕ್ಕಾಗುವ ವ್ಯತ್ಯಾಸವಾದರೂ ಏನು? ಇರುವ ಎಲ್ಲಾ ಸೀಟ್‍ಗಳನ್ನು ತೆರಾಸ ಬಾಚಿಕೊಂಡ ಮಾತ್ರಕ್ಕೆ ತೆಲಂಗಾಣ ರಾಜ್ಯ ಸೃಷ್ಟಿಯಾಗಿಬಿಡುತ್ತಾ? ಒಂದು ವೇಳೆ ಈಗ ಇರುವ ಸೀಟ್‍ಗಳಲ್ಲಿ ಒಂದೋ, ಎರಡೋ ಸೀಟ್‍ಗಳನ್ನು ತೆರಾಸ ಕಳೆದುಕೊಂಡ ಮಾತ್ರಕ್ಕೆ, ತೆಲಂಗಾಣದ ನೆಲದಲ್ಲಿ ಇಷ್ಟು ತಿಂಗಳುಗಳಿಂದ ನಡೆದ ಚಳುವಳಿಗಳೂ, ಬಲಿದಾನಗಳೂ ನಿಷ್ಪ್ರಯೋಜಕವಾಗಿ, ಪಾರ್ಟಿಗಳನ್ನು, ವರ್ಗಗಳನ್ನು ಮೀರಿ ತೆಲಂಗಾಣದ ಹಳ್ಳಿ ಹಳ್ಳಿಗಳಲ್ಲೂ ಪಸರಿಸಿರುವ ನವ ಚೈತನ್ಯವು ನಿಸ್ತೇಜಗೊಂಡು ಅಳಿಸಿ ಹೋಗಿಬಿಡುತ್ತದೆಯೇ?

ತೆಲಂಗಾಣಕ್ಕಲ್ಲದಿದ್ದರೂ, ಕಣದಲ್ಲಿರುವ ಪ್ರತಿಯೊಬ್ಬ ಪೈಲ್ವಾನನಿಗೂ ಈ ಉಪ-ಚುನಾವಣೆಯೆಂಬುದು ಒಂದು ರೀತಿಯ ಅಗ್ನಿ ಪರೀಕ್ಷೆಯೇ! ಪಾರ್ಟಿ ಹೈಕಮಾಂಡ್ ಬೇಡವೆಂದು ಹೆಚ್ಚರಿಸಿದ್ದರೂ, ಅದರ ಮಾತನ್ನು ಕೇಳದೇ ಎಲ್ಲಾ ಸ್ಥಾನಗಳಿಗೂ ’ಕರ್ಚೀಫ್ ಹಾಕಿರುವ’ ಕಾಂಗ್ರೇಸ್ ಮರ್ಯಾದೆ ಉಳಿಸಿಕೊಳ್ಳದಿದ್ದರೆ ನಗೆಪಾಟಲಾಗುವುದಂತೂ ಗ್ಯಾರಂಟಿ. ಕೇವಲ ವೈ. ಎಸ್. ರವರ ಕೈಚಳಕದಿಂದ ಗೆದ್ದು ಬಂದಿದ್ದ ಕಾಂಗ್ರೇಸ್, ತೆಲಂಗಾಣದಲ್ಲಿ ಎಡವಿಬಿಟ್ಟರೆ, ರೋಶಯ್ಯನ ಹಿಂದೆ ಬಿದ್ದಿರುವ ನಿಗೂಢ ಕುತಂತ್ರಿಗಳಿಗೆ ಹಬ್ಬವೋ ಹಬ್ಬ. ಮಿಕ್ಕ ಸೀಟುಗಳ ಮಾತು ಒತ್ತಟ್ಟಿಗಿರಲಿ; ತನ್ನ ಊರಿನಲ್ಲಿ ತನ್ನ ಸೀಟಿಗೇ ನಾಮ ತಿಕ್ಕಿಸಿಕೊಂಡುಬಿಟ್ಟರೇ, ’ಧರ್ಮಪುರಿ’ [ಡಿ. ಶ್ರೀನಿವಾಸ್] ಗಳಿಗೆ ತಾವು ಜೊಲ್ಲುಸೋರಿಸುತ್ತಾ ಕುಂತಿರುವ ’ಅಧಿಕಾರ ಸ್ಥಾನ’ ಕೈ ತಪ್ಪಿ ಹೋಗುವುದಲ್ಲದೇ ’ಈಗಿರುವ ಸ್ಥಾನಕ್ಕೇ’ ಧಕ್ಕೆಯುಂಟಾಗಬಹುದು. ’ಪವರ್’ ಮೇಲಿನ ಆಸೆಯಿಂದ, ಒಂದೆರೆಡು ಜುಜುಬಿ ಸೀಟ್‍ಗಳಿಗಾಗಿ ನೀತಿ ತಪ್ಪಿ ತೆಲಂಗಾಣ ಶೈಲಿಯನ್ನು ಅನುಕರಿಸುತ್ತಿರುವ ’ಎರಡು ಕಣ್ಣಿನ’ ಚಂದ್ರಬಾಬುಗೆ ತೆಲಂಗಾಣದಲ್ಲಿ ಬೋಣಿ ಮಾಡದೇ ಹೋದರೆ, ಮೊದಲೇ ಸಡಿಲಗೊಂಡಿರುವ ಪಾರ್ಟಿಯೊಳಗೆ ಇನ್ನೂ ತಾಪತ್ರಯಗಳಾಗಲಿವೆ.

ಈಗ ಸ್ಪರ್ಧಿಸುತ್ತಿರುವ ಸ್ಥಾನಗಳಲ್ಲಿ ಯಾವೊಂದೂ ತಮ್ಮ ಸ್ಥಾನವಾಗಿಲ್ಲವಾದ್ದರಿಂದ ಗೆಲ್ಲಲಾಗದೇ ಇರುವುದು ಷಂಡತನವಲ್ಲವೆಂದು ಇತರೆ ಪಕ್ಷಗಳು ವಾದಿಸಬಹುದು. ಈ ನಿಟ್ಟಿನಲ್ಲಿ, "ಗುಲಾಬಿ ಪಕ್ಷಕ್ಕೆ" ಆ ಅದೃಷ್ಟವೂ ಇಲ್ಲ. ಇರುವ ಸ್ಥಾನಗಳೆಲ್ಲಾ ಅವರವೇ. ಯಾವೊಂದು ಸೀಟ್ ಕೈಬಿಟ್ಟರೂ ತಮ್ಮ ಮರ್ಯಾದೆಗೆ ಧಕ್ಕೆ. ಅಂದುಕೊಂಡಂತೆ ಎಲ್ಲಾ ನಡೆದು, ಇರುವ ಎಲ್ಲಾ ಸ್ಥಾನಗಳನ್ನು ಗೆದ್ದರೂ..... ಹೇಗೂ ಅವು ನಿಮ್ಮ ಸ್ಥಾನಗಳೇ; ನಿಮ್ಮ ಸ್ಥಾನಗಳನ್ನು ನೀವು ಗೆದ್ದುಕೊಂಡರೆ ಅದರಲ್ಲಿ ಅಂಥಾ ದೊಡ್ಡತನವೇನಿದೆ ಎಂದು ಎದುರಾಳಿಗಳು ಹೀಯಾಳಿಸಬಹುದು. ಒಂದು ವೇಳೆ ನಸೀಬು ಕೈಕೊಟ್ಟು, ಎರಡೋ, ಮೂರೋ ಸ್ಥಾನಗಳು ಕೈತಪ್ಪಿಹೋದರೆ, "ಗುಲಾಬಿ ಅಂಗಡಿ" ದಿವಾಳಿ ಎದ್ದೋಯ್ತು ಎಂದು ಅವರೇ ಡಂಗುರ ಸಾರುವುದು ತಪ್ಪದು.

ಪಾಪ ತೆರಾಸ!!!!

Jun 22, 2010

ఆమె వెళ్ళిపోయిన రోజు

ఆమె వెళ్ళిపోయిన రోజు
నా ముఖాన మసి రాసుకున్నాను.
కౄరమైన పిచ్చిగాలి చెంప పగులగొట్టాను.
ముక్కచెక్కలైన జీవితాన్ని నా చేతికెత్తుకున్నాను.
పగిలిన అద్దం ముందు నగ్నంగా నిలబడ్డాను.
నా మీద నాకే ఆవేశం.
హుందాగా సూర్యుడిని "మూర్ఖుడా!" అని తిట్టాను.
రంగుల లోకపు వైతాళికులను వెతికి వెతికి "థూ!" అన్నాను.
తూర్పునుండి పడమర వైపు చెప్పులు లేకుండా నడిచాను.
దారిలో పడి ఉన్న కంకర రాళ్ళను మీద చల్లుకున్నాను.
సంభ్రమ స్ఫూర్తితో కొండ కోనల్ని చీల్చి
పారే నీటికి యే సముద్రం చేరే కోరికో?
లేదా, మందగతిలో ఇసుక ఒడిలో కూరుకుపోయే ఉద్వేగమో?

నాలో నేను లేనన్నది ప్రశ్న.
ఇక ఆమె కళేభరాన్ని అక్కున చేర్చుకొని
రోధించడం ఎలా?
ఆమె వెళ్ళిపోయిన రోజు
నా ముఖాన మసి రాసుకున్నాను.

మరాఠి మూలం: నామ్ దేవ్ ఢసాళ్
తెలుగు సేత: హరీశ్. జీ.

[ఈ కవిత 06 జూన్ 2010 నాడు "ఆదివారం ఆంధ్రజ్యోతి" లో ప్రచురితమైనది.]

Jun 3, 2010

What a difference!!

Despite government's efforts to make education an integral part of every child in the country, a few children have no option but to labour. Suggestions to eradicate child labour in however small a way are welcome.