Aug 20, 2010

ಡಿಮ್ಯಾಂಡ್

ಆಕಾಶದಲ್ಲಿ
ನನ್ನನ್ನು ಆಡಲು ಬಿಡಿ
ಪಾರಿವಾಳದಂತೆ ಹಾರಬೇಕು
ನನ್ನನ್ನು ತಡೆಯಬೇಡಿ.

ತಾರೆಗಳನ್ನು
ಎಣಿಸಲು ಬಿಡಿ
ನನ್ನ ದೇಶದಲ್ಲಿ
ಲಕ್ಷಗಟ್ಟಲೆ ಗುಡಿಸಲುಗಳು
ಕತ್ತಲಲ್ಲಿವೆ -
ಸಾಕಾಗಬಹುದೇನೋ
ಲೆಕ್ಕ ಹಾಕಲು ಬಿಡಿ.

ಬೆಳದಿಂಗಳೆಂದರೆ ನನಗೂ ಇಷ್ಟ
ಚಂದಮಾಮನನ್ನು
ಮುದ್ದಾಡುವಾಸೆ.
ಚಂದ್ರಮಂಡಲ ಉಳ್ಳವರ ಸ್ವತ್ತಾಗಬಾರದು.
ನನ್ನನ್ನೂ ಹೋಗಲು ಬಿಡಿ.

ಸೂರ್ಯನನ್ನು
ನನ್ನ ಮನೆಯೊಳಗೆ
ಮನದೊಳಗೆ
ಮೈಯೊಳಗೆ ಕರೆಯುವೆನು.
ಕ್ರೂರ ಮೃಗಗಳು ಅಡ್ಡನಿಂತಿವೆ
ಆಯುಧಗಳನ್ನು ಕೊಡಿ
ಕೊಚ್ಚಿ ಅವುಗಳನ್ನು
ಸೂರ್ಯನಿಗೆ ಸ್ವಾಗತ ಕೋರುವೆ.

[ತೆಲುಗು ಮೂಲ: ಸಿ. ಹೆಚ್. ಮಧು. ]

No comments:

Post a Comment