ಜೀವ ಉಳಿಸುವಷ್ಟು ಉಸಿರನ್ನು ಮಾತ್ರ ಕೊಡು
ಉಸಿರುಗಟ್ಟಿಸುವ ಸುಳಿಗಾಳಿಯಿಂದೆನ್ನ ರಕ್ಷಿಸು;
ಬಾಯಾರಿಕೆ ತೀರುವಷ್ಟು ನೀರನ್ನು ಮಾತ್ರ ಕೊಡು
ಮನುಕುಲವ ಮುಳುಗಿಸುವ ಪ್ರಳಯದಿಂದ ರಕ್ಷಿಸು;
ಹೊಟ್ಟೆಪಾಡಿಗೆ ಬೇಕಾದಷ್ಟು ದುಡ್ಡನ್ನು ಮಾತ್ರ ಕೊಡು
ಆತ್ಮವ ಕೊಲ್ಲುವ ಸಿರಿಸಂಪತ್ತುಗಳಿಂದ ರಕ್ಷಿಸು.
[ತೆಲುಗು ಮೂಲ: ಜಲಾಡಿ ರತ್ನ ಸುಧೀರ್]
Showing posts with label ಕವಿತೆಗಳು. Show all posts
Showing posts with label ಕವಿತೆಗಳು. Show all posts
Aug 20, 2010
ಡಿಮ್ಯಾಂಡ್
ಆಕಾಶದಲ್ಲಿ
ನನ್ನನ್ನು ಆಡಲು ಬಿಡಿ
ಪಾರಿವಾಳದಂತೆ ಹಾರಬೇಕು
ನನ್ನನ್ನು ತಡೆಯಬೇಡಿ.
ತಾರೆಗಳನ್ನು
ಎಣಿಸಲು ಬಿಡಿ
ನನ್ನ ದೇಶದಲ್ಲಿ
ಲಕ್ಷಗಟ್ಟಲೆ ಗುಡಿಸಲುಗಳು
ಕತ್ತಲಲ್ಲಿವೆ -
ಸಾಕಾಗಬಹುದೇನೋ
ಲೆಕ್ಕ ಹಾಕಲು ಬಿಡಿ.
ಬೆಳದಿಂಗಳೆಂದರೆ ನನಗೂ ಇಷ್ಟ
ಚಂದಮಾಮನನ್ನು
ಮುದ್ದಾಡುವಾಸೆ.
ಚಂದ್ರಮಂಡಲ ಉಳ್ಳವರ ಸ್ವತ್ತಾಗಬಾರದು.
ನನ್ನನ್ನೂ ಹೋಗಲು ಬಿಡಿ.
ಸೂರ್ಯನನ್ನು
ನನ್ನ ಮನೆಯೊಳಗೆ
ಮನದೊಳಗೆ
ಮೈಯೊಳಗೆ ಕರೆಯುವೆನು.
ಕ್ರೂರ ಮೃಗಗಳು ಅಡ್ಡನಿಂತಿವೆ
ಆಯುಧಗಳನ್ನು ಕೊಡಿ
ಕೊಚ್ಚಿ ಅವುಗಳನ್ನು
ಸೂರ್ಯನಿಗೆ ಸ್ವಾಗತ ಕೋರುವೆ.
[ತೆಲುಗು ಮೂಲ: ಸಿ. ಹೆಚ್. ಮಧು. ]
Nov 23, 2009
ಹನಿಗವನಗಳು
ಆಕೆಯೊಡನೆ
ಇಟ್ಟದ್ದು ಏಳು ಹೆಜ್ಜೆಗಳೇ
ಈಗ ದಾಟಿಸುತಿವೆ
ಸಪ್ತ ಸಾಗರಗಳ !
ಬಡಾಯಿ ಕೊಚ್ಕೋತೀವಿ
ಅನುವಾಗದ ಜಾಗದಲ್ಲೂ
ಬಾಳಿ ಬೆಳೆದದ್ದು
ಅಮ್ಮ, ಅವಳೊಬ್ಬಳೇ !
ಆಕೆ
ಎಷ್ಟು ಸಲ ಬೇಕಾದ್ರೂ
ಕ್ಷಮಿಸುವಳು !
ಇನ್ನು ನನ್ನ ತಪ್ಪುಗಳಿಗೇನು ಲೆಕ್ಕ ?
Subscribe to:
Posts (Atom)